ಡೆಲಿವರಿ ಬಾಯ್ಸ್‌ಗಾಗಿ ಎಚ್ಚರಿಕೆ

ಸಾಮಾನ್ಯವಾಗಿ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೆಲಸ ಮಾಡುತ್ತಿರುವವರಿಗೆ ಫುಡ್ ಡೆಲಿವರಿ ಜಾಬ್ ಒಂದು ಸಾಮಾನ್ಯ ಉದ್ಯೋಗವಾಗಿ ಪರಿಣಮಿಸಿದೆ. ಜಮಾಟೋ, ಸ್ವಿಗ್ಗಿ ಸೇರಿದಂತೆ ಹಲವು ಆ್ಯಪ್‌ಗಳ ಮೂಲಕ ಸಾವಿರಾರು ಯುವಕರು ದಿನನಿತ್ಯ ಡೆಲಿವರಿ ಮಾಡುತ್ತಿದ್ದಾರೆ. ಮಳೆ, ಬಿಸಿಲು, ರಾತ್ರಿ–ಹಗಲು ಎನ್ನದೇ ಗ್ರಾಹಕರಿಗೆ ಆಹಾರ ತಲುಪಿಸುವ ಈ ಡೆಲಿವರಿ ಬಾಯ್ಸ್ ಎದುರಿಸುವ ಸವಾಲುಗಳು ಒಂದೆರಡಲ್ಲ.ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ನೋಡಿದ ಹಲವರಲ್ಲಿ ಭಯ, ಅಚ್ಚರಿ ಹಾಗೂ ಅನುಮಾನಗಳು ಮೂಡಿವೆ.
📍 ಏನಿದು ಘಟನೆ?
ವಿಡಿಯೋದಲ್ಲಿರುವ ಮಾಹಿತಿಯ ಪ್ರಕಾರ, ಒಬ್ಬ ಮಹಿಳೆ ಆನ್‌ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಡೆಲಿವರಿ ಬಾಯ್ ಸಮಯಕ್ಕೆ ಸರಿಯಾಗಿ ಪಾರ್ಸಲ್ ತೆಗೆದುಕೊಂಡು ಲೊಕೇಶನ್‌ಗೆ ತಲುಪಿದ್ದಾರೆ. ಆದರೆ ನಿಖರವಾದ ಲೊಕೇಶನ್ ಸಿಗದೆ ಇದ್ದ ಕಾರಣ ಅವರು ಗ್ರಾಹಕೆಗೆ ಕರೆ ಮಾಡಿ ದಾರಿಯ ಬಗ್ಗೆ ಕೇಳಿದ್ದಾರೆ.ಆ ಸಮಯದಲ್ಲಿ ಮಹಿಳೆ ಹೇಳಿರುವ ಉತ್ತರವೇ ಡೆಲಿವರಿ ಬಾಯ್‌ಗೆ ಶಾಕ್ ನೀಡಿದೆ.“ಎಡಕ್ಕೂ ಬೇಡ, ಬಲಕ್ಕೂ ಬೇಡ… ನಾಯಿ ಕುತ್ತಿರೋ ಜಾಗದ ಬಳಿ ಬನ್ನಿ… ಅದು ಸ್ಮಶಾನ. ಒಳಗಡೆ ಬನ್ನಿ” ಎಂದು ಮಹಿಳೆ ಹೇಳಿದ್ದಾಳೆ ಎನ್ನಲಾಗಿದೆ.
😨 ಭಯದಲ್ಲಿ ಡೆಲಿವರಿ ಬಾಯ್ಸ್
ಒಳಗೆ ಬನ್ನಿ ಎಂದು ಪದೇಪದೇ ಹೇಳಿದ್ದರಿಂದ ಡೆಲಿವರಿ ಬಾಯ್ ಗಾಬರಿಗೊಂಡಿದ್ದಾರೆ.“ನೀವೇ ಹೊರಗೆ ಬಂದು ಪಾರ್ಸಲ್ ತೆಗೆದುಕೊಳ್ಳಿ” ಎಂದು ಕೇಳಿದರೂ, ಮಹಿಳೆ ನಿರಾಕರಿಸಿ,“ಏಕೆ ಭಯ ಆಗ್ತಾ ಇದೆಯಾ? ನಾವು ಗೆಳೆಯರ ಜೊತೆ ಪಾರ್ಟಿ ಮಾಡ್ತಾ ಇದ್ದೀವಿ” ಎಂದು ಹೇಳಿದ್ದಾಳೆ ಎನ್ನಲಾಗಿದೆ.ಸ್ಮಶಾನದಲ್ಲಿ ಪಾರ್ಟಿ ಎನ್ನುವ ಮಾತು ಕೇಳಿದ ತಕ್ಷಣ ಡೆಲಿವರಿ ಬಾಯ್ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ನಾಯಿಗಳ ಶಬ್ದ, ಕತ್ತಲೆ ವಾತಾವರಣ – ಎಲ್ಲವೂ ಸೇರಿ ಅವರಿಗೆ ಭಯ ಹೆಚ್ಚಾಗಿದೆ.
❌ ಆರ್ಡರ್ ಕ್ಯಾನ್ಸಲ್
ಪದೇಪದೇ “ಒಳಗೆ ಬನ್ನಿ” ಎಂದು ಒತ್ತಾಯಿಸಿದರೂ, ಡೆಲಿವರಿ ಬಾಯ್ ನಿರಾಕರಿಸಿದ್ದಾರೆ.ಅದಕ್ಕೆ ಮಹಿಳೆ,“ನೀವು ಬರಲಿಲ್ಲ ಅಂದ್ರೆ ಆರ್ಡರ್ ಕ್ಯಾನ್ಸಲ್ ಮಾಡ್ತೀನಿ” ಎಂದು ಹೇಳಿದ್ದಾಳೆ ಎನ್ನಲಾಗಿದೆ.ಕೊನೆಗೆ ಡೆಲಿವರಿ ಬಾಯ್ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿಂದ ಹೊರಟುಹೋಗಿದ್ದಾರೆ.
📱 ವೈರಲ್ ವಿಡಿಯೋ – ನಿಜವೋ ಸುಳ್ಳೋ?
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಕೆಲವರು ಇದನ್ನು ನಿಜ ಘಟನೆ ಎಂದು ನಂಬಿದ್ದಾರೆ.ಇನ್ನು ಕೆಲವರು ಕಂಟೆಂಟ್‌ಗಾಗಿ ಮಾಡಿದ ಫೇಕ್ ವಿಡಿಯೋ, ಪ್ರಚಾರದ ಗಿಮಿಕ್ ಎಂದು ಆರೋಪಿಸಿದ್ದಾರೆ.ಆದರೆ ಈ ಘಟನೆ ಎಲ್ಲಿ ನಡೆದಿದೆ, ಯಾರು ಆ ಮಹಿಳೆ, ಡೆಲಿವರಿ ಬಾಯ್ ಯಾರು ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
⚠️ ಡೆಲಿವರಿ ಬಾಯ್ಸ್‌ಗಾಗಿ ಎಚ್ಚರಿಕೆ
ಈ ವಿಡಿಯೋ ನೋಡಿದ ಅನೇಕರು,“ಡೆಲಿವರಿ ಮಾಡುವವರು ಹೆಚ್ಚಿನ ಎಚ್ಚರಿಕೆಯಿಂದ ಕೆಲಸ ಮಾಡಬೇಕು”“ಸಂದೇಹಾಸ್ಪದ ಲೊಕೇಶನ್ ಇದ್ದರೆ ಆ್ಯಪ್ ಸಪೋರ್ಟ್‌ಗೆ ಮಾಹಿತಿ ನೀಡಬೇಕು”ಎಂದು ಸಲಹೆ ನೀಡಿದ್ದಾರೆ.

Leave a Reply